‘ಬರ್ತಾನಪ್ಪ ಬೂಪಾ ಈ ಬಂಗಾರಿ ಮಡಿಲಿನಲ್ಲಿ’ ಎಂದು ಜೈಲಿನಲ್ಲಿ‌ ಕುಣಿದಾಡಿದ ದರ್ಶನ್.ಅಭಿ ತಂದೆಯಾಗುತ್ತಿರುವ ವಿಷಯ ತಿಳಿಸಿದ ಸುಮಲತಾ

ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಅಂಬರೀಶ್ ಹಾಗೂ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಈ ವರ್ಷ ಡಬಲ್ ಸಂಭ್ರಮಾಚರಣೆ ನಡೆಸಿದ್ದಾರೆ.ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅವಿವ ಬಿದ್ದಪ್ಪ ಸೀಮಂತ ಕಾರ್ಯಕ್ರಮ ಈ ತಿಂಗಳು ಅದ್ಧೂರಿಯಾಗಿ ನಡೆಯಲಿದೆ. ಗುಡ್ ನ್ಯೂಸ್ ಬಹಿರಂಗವಾದ ನಂತರ, ಅಂಬಿ ಕುಟುಂಬ ದೇವಸ್ಥಾನವನ್ನು ಸುತ್ತುತ್ತಿದ್ದಾರೆ.ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ, ಸುಮಲತಾ ಅಂಬರೀಶ್ ಹಾಗೂ ಸುಮಲತಾ ಸಹೋದರಿ ತಿರುಪತಿ ತಿಮ್ಮಪ್ಪ ದರ್ಶನ ಪಡೆದಿದ್ದಾರೆ.

 

 

View this post on Instagram

 

A post shared by Mrs. Abishek (@avivabidapa)

 

ತಿರುಪತಿಯಲ್ಲಿ ವಿಶೇಷ ದರ್ಶನ ಪಡೆದ ಬಳಿಕ ಅಲ್ಲಿನ ತಮ್ಮ ಆಪ್ತ ಮೋಹನ್ ಬಾಬು ನಿವಾಸಕ್ಕೆ ಭೇಟಿ ನೀಡಿದರು. ನಮ್ಮ ಜೂನಿಯರ್ ಅಂಬರೀಶ್ ಎಂಟ್ರಿ ಕೊಡಲು ಹೊರಟಿದ್ದು ಶುಭ ಹಾರೈಕೆ ತಂಗಿ… ನಮ್ಮ ಮಂಡ್ಯಕ್ಕೆ ಬನ್ನಿ ಬಿಸಿ ಬಿಸಿ ಅಡುಗೆ ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತೀವಿ ಅಂತ ಅಭಿಮಾನಿಗಳು ಹೇಳಿದ್ದಾರೆ.

ಈ ವಾರ ಅವಿವ ಬಿದ್ದಪ್ಪ ಅವರ ಸೀಮಂತ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಲಾಗಿದೆ. ಅಂಬರೀಷ್ ನಿವಾಸದಲ್ಲಿ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ. ಅಭಿಷೇಕ್ ಅಂಬರೀಶ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರೆ, ಅವಿವಾ ಬಿದ್ದಪ್ಪ ಫ್ಯಾಷನ್ ಲೋಕದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಸ್ವಿಮ್ ಸೂಟ್ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಸದ್ಯ ಅಭಿಷೇಕ್ ಅಂಬರೀಶ್ ಎಲ್ಲಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಪತ್ನಿ ಜೊತೆ ಕಾಲ ಕಳೆಯುತ್ತಿದ್ದಾರೆ.

 

 

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಸುಮಲತಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ನನ್ನು ಬೇಟೆ ಮಾಡಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ, ವಿಷಯ ತಿಳಿದು ‘ಬರ್ತಾನಪ್ಪ ಬೂಪಾ ಈ ಬಂಗಾರಿ ಮಡಿಲಿನಲ್ಲಿ ಎಂದು ಜೈಲಿನಲ್ಲಿ‌ ಕುಣಿದಾಡಿದ್ದಾರೆ ದರ್ಶನ್ ಎನ್ನಲಾಗುತ್ತಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಒಂದೂವರೆ ತಿಂಗಳು ಮಾತ್ರ ಜೈಲು ವಾಸ ಅನುಭವಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ. ಆದರೆ ದರ್ಶನ್ ಗೆ ಜಾಮೀನು ಸಿಗುತ್ತಾ… ಇಲ್ಲವೇ? ಇದೀಗ ಇದು ಬಹಳ ಮುಖ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ.

 

 

ಹಿರಿಯ ಪೊಲೀಸ್ (ನಿವೃತ್ತ) ಲೋಕೇಶ್ವರ್ ಅವರ ಪ್ರಕಾರ, “ಈ ಪ್ರಕರಣವು ವಿಶೇಷ ಪ್ರಕರಣವಾಗಿದೆ. ಹೀಗಾಗಿ ದರ್ಶನ್ ಜಾಮೀನು ಪಡೆಯುವುದು ತುಂಬಾ ಕಷ್ಟ.” ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೆಲವು ಪ್ರಮುಖ ಸಾಕ್ಷಿಗಳನ್ನು ಹಾಜರುಪಡಿಸಿದ್ದು, ಇವು ಬಲಿಷ್ಠವಾಗಿವೆ. ತಾಂತ್ರಿಕ ಪುರಾವೆಗಳು ಸಹ ಪ್ರಬಲವಾಗಿವೆ ಎಂದು ಹೇಳಲಾಗುತ್ತದೆ.

Leave a Comment