ಭೂಮಿ ಶೆಟ್ಟಿ ಯುರೋಪ್ ಪ್ರವಾಸದಲ್ಲಿ ಎಂಜಾಯ್ ಸುತ್ತಾಟ ಮಾಡುತ್ತಿದ್ದಾರೆ

bhoomi shetty europe trip: ‘ಬಿಗ್ ಬಾಸ್ ಕನ್ನಡ ಸೀಸನ್ 7’ ರ ಸ್ಪರ್ಧಿಯೂ ಆಗಿರುವ ನಟಿ ಭೂಮಿ ಶೆಟ್ಟಿ ಯುರೋಪ್ ಪ್ರವಾಸದಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 

 

ಭೂಮಿ ಶೆಟ್ಟಿ ಮೂಲತಃ ಕುಂದಾಪುರದವರಾಗಿದ್ದು, ಇಲ್ಲಿಯವರೆಗೆ ಕನ್ನಡ ಮತ್ತು ತೆಲುಗಿನಲ್ಲಿ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಬೆಂಗಳೂರಿನಿಂದ ಕುಂದಾಪುರಕ್ಕೆ ಏಕಾಂಗಿಯಾಗಿ ಬೈಕ್‌ನಲ್ಲಿ ತೆರಳಿದ್ದ ಭೂಮಿ ಶೆಟ್ಟಿಗೆ ಪ್ರಯಾಣ ಎಂದರೆ ತುಂಬಾ ಇಷ್ಟ. ಸೋಲೋ ಟ್ರಿಪ್ ಮಾಡಬೇಕೆನ್ನುವ ಭೂಮಿ ಶೆಟ್ಟಿ ಈ ಬಾರಿ ಒಂಟಿಯಾಗಿ ಟ್ರಿಪ್ ಹೋಗಿದ್ದಾರೋ ಇಲ್ಲವೋ ಗೊತ್ತಿಲ್ಲ.

 

 

ಭೂಮಿ ಶೆಟ್ಟಿ ಕನ್ನಡವಲ್ಲದೆ ಬೇರೆ ಭಾಷೆಗಳಲ್ಲಿ ನಟಿಸಿದ್ದಾರೆ. ಆರಂಭದಲ್ಲಿ ಕನ್ನಡ ಟಿವಿ ಧಾರಾವಾಹಿ ‘ಕಿನ್ನರಿ’ಯಲ್ಲಿ ನಟಿಸಿದ್ದ ಭೂಮಿ ಶೆಟ್ಟಿ ನಂತರ ‘ಮಜಾ ಭಾರತ್’ ಕಾರ್ಯಕ್ರಮದ ನಿರೂಪಕರಾಗಿದ್ದರು.

ಇದಲ್ಲದೇ ತೆಲುಗು ಧಾರಾವಾಹಿಯಲ್ಲೂ ನಟಿಸಿದ್ದರು. ‘ಇಕ್ಕತ್’ ಸಿನಿಮಾದಲ್ಲಿ ನಟಿಸಿದ್ದ ಭೂಮಿ ಶೆಟ್ಟಿ ಈಗ ತೆಲುಗು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ಭೂಮಿ ಶೆಟ್ಟಿಗೆ ವಿವಿಧ ರೀತಿಯ ಫೋಟೋಶೂಟ್ ಮಾಡಲು ಇಷ್ಟ. ಅವರು ಸಂಸ್ಕೃತಿ ಸೇರಿದಂತೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ ಮತ್ತು ವಿಭಿನ್ನ ಪಾತ್ರಗಳನ್ನು ಮಾಡಲು ಬಯಸುತ್ತಾರೆ. ಭೂಮಿ ಶೆಟ್ಟಿ ತಮ್ಮ ಯುರೋಪಿಯನ್ ಪ್ರವಾಸವನ್ನು ಆನಂದಿಸುತ್ತಿದ್ದಾರೆ.

Leave a Comment