Senior Actress Annapurna About Casting Couch In Industry: ಸಿನಿಮಾ ಇಂಡಸ್ಟ್ರಿ ಹೇಗಿರುತ್ತೋ ಎಂಬ ಭಯದಿಂದ ಅನ್ನಪೂರ್ಣಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ನಟನೆಗೆ ಮುಂದಾದರು.ತಮಿಳು ಚಿತ್ರರಂಗದಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅನ್ನಪೂರ್ಣಮ್ಮ ಮೊಟ್ಟಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 25ರ ಹರೆಯದಲ್ಲಿ ತಾಯಿ ಪಾತ್ರ ಮಾಡಲು ಆರಂಭಿಸಿದ ನಟಿಗೆ ಈಗ 80 ದಾಟಿದೆ. ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು, ಅಜ್ಜಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.
ಟಾಲಿವುಡ್ ನಲ್ಲಿ ಸುಮಾರು ಮೂರು ತಲೆಮಾರಿನ ನಾಯಕ-ನಾಯಕಿಯರೊಂದಿಗೆ ನಟಿಸಿರುವ ಅನ್ನಪೂರ್ಣಮ್ಮ ಅವರನ್ನು ಗ್ಲಾಮರ್ ಅಜ್ಜಿ ಎಂದೇ ಕರೆಯುತ್ತಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಅವಕಾಶ ಸಿಕ್ಕರೆ ಏನು ಮಾಡಬೇಕು ಎಂದು ಕೇಳುತ್ತಿದ್ದರು. ಅದಕ್ಕಾಗಿಯೇ 20ನೇ ವಯಸ್ಸಿಗೆ ಮದುವೆಯಾದ ನಾನು 25ನೇ ವಯಸ್ಸಿನಲ್ಲಿ ತಾಯಿ ಪಾತ್ರ ಮಾಡಲು ಆರಂಭಿಸಿದೆ’ ಎಂದರು.
ಸಿನಿಮಾ ಶೂಟಿಂಗ್ ಎಲ್ಲೋ ನಡೆಯುತ್ತೆ, ಎಲ್ಲೋ ಹೋಗಿ ಎಲ್ಲೋ ಉಳಿಯಬೇಕು. ಮಧ್ಯರಾತ್ರಿ 2 ಗಂಟೆಯಾದರೂ ನಮ್ಮ ರೂಮಿನ ಬಾಗಿಲು ಬಡಿಯುತ್ತಿದ್ದರು ಗಂಡಸರು ಎಂದ ಅನ್ನಪೂರ್ಣಮ್ಮ, ಎಲ್ಲೆಂದರಲ್ಲಿ ಏಡ್ಸ್ ರೋಗ ಶುರುವಾದಾಗ ಭಯ ಆಗ್ತಿತ್ತು, ಆಗ ಗಂಡಸರು ಇದೆನೆಲ್ಲಾ ಕಡಿಮೆ ಮಾಡಿದರು’ ಎಂದರು ಅನ್ನಪೂರ್ಣಮ್ಮ.
ಅನ್ನಪೂರ್ಣಮ್ಮ ಚಿತ್ರದಲ್ಲಿ ಎನ್‌ಟಿಆರ್, ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ಕೃಷ್ಣಂರಾಜು, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಸುಮನ್ ಮತ್ತು ರಾಜೇಂದ್ರಪ್ರಸಾದ್ ದೊಡ್ಡ ತಾರಾಬಳಗದಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾದಲ್ಲಿ ನಟಿಸದಿದ್ದರೂ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.