ಗಂಧದ ಗುಡಿ ಹಿನ್ನೆಲೆಯಲ್ಲಿ ಚಿತ್ರವು ಸಿಕ್ಕಿದ್ದು,ಅಪ್ಪ ನನಗೆ ಒಂದು ಸಲಹೆ ಕೊಟ್ಟಿದ್ದಾರೆ:ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಮಾತು

Nenapirali Prem daughter first movie: ನೆನಪಿರಲಿ ಪ್ರೇಮ್ ಮಗಳು(nenapirali Prem daughter) ಅಮೃತ ಪ್ರೇಮ್ ಇದೀಗ ಡಾಲಿ ಧನಂಜಯ್ ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ(tagaru palya) ಎನ್ನುವ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಟಗರು ಪಲ್ಯ ಚಿತ್ರಕ್ಕೆ ಬಡವ ರಾಸ್ಕಲ್(badawa rascal) ಚಿತ್ರದ ಖ್ಯಾತಿಯ ನಾಗಾಭರಣರವರು ನಾಯಕನಟನಾಗಿದ್ದಾರೆ. ನಟ ನೆನಪಿರಲಿ ಪ್ರೇಮ್ ಮಗಳು ಅಮೃತ ಪ್ರೇಮ್(Amruta Prem) ಇದೀಗ ಟಗರು ಪಲ್ಯ ಚಿತ್ರದ ನಾಯಕ ನಟಿಯಾಗಿ ಆಯ್ಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಟಗರುಪಲ್ಯ ಆ ಸಿನಿಮಾದ ಮುಹೂರ್ತದ ವೇಳೆ ಮಾತನಾಡಿದ್ದಾರೆ.

 

 

ನೆನಪಿರಲಿ ಪ್ರೇಮ್ ರವರು ತಮ್ಮ ಮಗಳ ಮೊದಲ ಸಿನಿಮಾದ ಬಗ್ಗೆ ಮಾತನಾಡಿ ಅವಳು ಟಗರು ಪಲ್ಯ ಚಿತ್ರದ ಮೂಲಕ ಗಾಂಧಿನಗರಕ್ಕೆ ಮಾತ್ರ ಎಂಟ್ರಿ ಆಗುತ್ತಿಲ್ಲ ಬದಲಾಗಿ ಕರ್ನಾಟಕದ ಜನರ ಹೃದಯಕ್ಕೆ ಎಂಟ್ರಿ ಆಗುತ್ತಿದ್ದಾಳೆ. ಕರ್ನಾಟಕದ ಮನೆಮಗಳಾಗಿ ಇದೀಗ ಟಗರು ಪಲ್ಯ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾಳೆ. ಒಬ್ಬ ತಂದೆಯಾಗಿ ನನ್ನ ಮಗಳ ಮೊದಲ ಸಿನಿಮಾದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆ ಇದ್ದು ತುಂಬಾ ಖುಷಿಯಾಗುತ್ತಿದೆ. ನಾನು ಇನ್ನು ಟ್ರೆಂಡಿಂಗ್ ಇರುವಾಗಲೇ ನನ್ನ ಮಗಳು ಕೂಡ ಹೀರೋಯಿನ್ ಆಗಿ ಅವಳ ಕಟ್ ಔಟ್ ನೋಡುವುದು ಎಂದರೆ ನನಗೆ ತುಂಬಾ ಖುಷಿ ಇದೆ.

ನನ್ನ ಮಗಳು ಅಮೃತ ಗೆ ಓದು ಎಂದರೆ ತುಂಬಾ ಇಷ್ಟ ಅವಳು ಓದುವುದನ್ನು ಬಿಟ್ಟು ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಆದರೆ ಇದೀಗ ಟಗರು ಪಲ್ಯ ಚಿತ್ರದ ಕಥೆಯನ್ನು ಕೇಳಿದ ತಕ್ಷಣ ಒಪ್ಪಿಕೊಂಡು ಈ ಚಿತ್ರಕ್ಕೆ ನಟಿಸಲು ಇದರಿಂದ ನಮಗೂ ಕೂಡ ಶಾಕ್ ಆಯಿತು. ಡಾಲಿ ಧನಂಜಯ್, ನಿರಂಜನ್, ಡೈರೆಕ್ಟರ್ ಉಮೇಶ್ ಇವರೆಲ್ಲರಿಗೂ ಕೂಡ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ.ಟಗರು ಪಲ್ಯ ಚಿತ್ರವು ಕನ್ನಡ ನಾಡಿನ ಅಚ್ಚ ಸೊಗಡಿನ ಚಿತ್ರವಾಗಿದ್ದು ಇದರ ಕಥೆಯನ್ನು ಬರೆದ ಅವರೆಲ್ಲರಿಗೂ ಕೂಡ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಮಗಳ ಹೊಸ ಚಿತ್ರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.

 

 

ಪ್ರೇಮ್ ಪುತ್ರಿ ಅಮೃತ ಕೂಡ ತಮ್ಮ ಮೊದಲ ಸಿನಿಮವಾದ ಟಗರು ಪಲ್ಯ ಚಿತ್ರದ ಬಗ್ಗೆ ಮಾತನಾಡಿ ನನಗೆ ಸಿನಿಮಾ ಫೀಲ್ಡ್ ತುಂಬಾ ಹೊಸದು ನಾನು ಕಲಿಯುವ ಉತ್ಸುಕತೆಯಲ್ಲಿದ್ದೇನೆ. ಇದೀಗ ವರ್ಕ್ ಶಾಪ್ ನಡೆಯುತ್ತಿದ್ದು ಚೆನ್ನಾಗಿ ಕಲಿಯುತ್ತೇನೆ ಎನ್ನುವ ಭರವಸೆ ಕೂಡ ನನಗೆ ಇದೆ. ನಾನು ಪಿಯುಸಿ ಓದುತ್ತಿದ್ದಾಗಲೂ ಕೂಡ ಹಲವಾರು ಆಫರ್ಸ್ ಗಳು ಬರುತ್ತಿದ್ದವು. ಆದರೆ ಅವುಗಳನ್ನು ನಾನು ಒಪ್ಪಿಕೊಂಡಿರಲಿಲ್ಲ ಇದೀಗ ನಾನು ಇಂಜಿನಿಯರಿಂಗ್ ಫೈನಲ್ ಇಯರ್ ಗೆ ಬಂದಿದ್ದು ನನಗೆ ಈಗ ಸ್ವಲ್ಪ ಸಮಯವಿದೆ ಹಾಗಾಗಿ ಈ ಚಿತ್ರಕ್ಕೆ ಒಪ್ಪಿಕೊಂಡಿದ್ದೇನೆ.

ನಾನು ಚಿತ್ರರಂಗಕ್ಕೆ ಬರಲು ಅಪ್ಪನೇ ನನಗೆ ಇನ್ಸ್ಪಿರೇಷನ್ ಅಪ್ಪ ಪ್ರೇಮ್ ರವರ ಎಲ್ಲಾ ಚಿತ್ರಗಳು ಕೂಡ ನನಗೆ ತುಂಬಾ ಇಷ್ಟ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ, ಅವರ ವ್ಯಕ್ತಿತ್ವ ಅವರು ಸಿನಿಮಾ ಫೀಲ್ಡ್ ನಲ್ಲಿ ಎಲ್ಲರ ಜೊತೆ ಸ್ನೇಹಿತರಂತೆ ಇರುವುದು ಇವೆಲ್ಲವೂ ಕೂಡ ನನಗೆ ತುಂಬಾ ಇಷ್ಟ ಎಂದರು. ನಾನು ಟಗರು ಪಲ್ಯ ಚಿತ್ರಕ್ಕೆ ಒಪ್ಪಿಕೊಂಡಿದ್ದು ಇದೀಗ ಶೂಟಿಂಗ್ ಕೂಡ ಶುರುವಾಗಲಿದೆ ನಾನು ಎಲ್ಲಾ ಸಿನಿಮಾಗಳನ್ನು ನೋಡುತ್ತೇನೆ. ಎಲ್ಲಾ ಸಿನಿಮಾಗಳನ್ನು ನೋಡಿದಾಗ ಒಂದೊಂದು ಸಿನಿಮಾದಲ್ಲಿ ಒಬ್ಬೊಬ್ಬರು ನನಗೆ ಇನ್ಸ್ಪಿರೇಷನ್ ಎನಿಸುತ್ತಾರೆ. ಟಗರು ಪಲ್ಯ ಚಿತ್ರವೂ ಹಳ್ಳಿ ಸೊಗಡಿನ ಚಿತ್ರವಾಗಿದ್ದು ಈ ಚಿತ್ರಕ್ಕೆ ಮಂಡ್ಯ ಭಾಷೆಯನ್ನು ಕಲಿಯಬೇಕಾಗಿತ್ತು.

 

 

ನನಗೆ ಇದೀಗಾಗಲೇ ಮಂಡ್ಯ ಭಾಷೆ(Mandya language) ಸ್ವಲ್ಪ ಸ್ವಲ್ಪ ಬರುತ್ತಿದ್ದು ನನ್ನ ಸ್ನೇಹಿತರ ಬಳಿ ಕಲಿತುಕೊಂಡಿದ್ದೆ ಹಾಗೆ ವರ್ಕ್ಶಾಪ್ ಮೂಲಕವೂ ಕೂಡ ಇದೀಗ ಕಲಿಯುತ್ತಿದ್ದೇನೆ. ನನಗೆ ಸಿನಿಮಾ ಮಾಡುತ್ತೇನೆ ಎಂದಾಗ ತುಂಬಾ ಭಯವಿತ್ತು ನನ್ನ ಅಪ್ಪ ಅಮ್ಮ ಕಾನ್ಫಿಡೆಂಟ್ ತುಂಬಿದರು ಇದೀಗ ನಾನು ಭಯವಿಲ್ಲದೆ ನಟಿಸಲು ಒಪ್ಪಿಕೊಂಡಿದ್ದೇನೆ. ನಾನು ಗಂಧದ ಗುಡಿ(gandhada gudi) ಸಿನಿಮಾವನ್ನು ಮೊನ್ನೆ ಅಷ್ಟೇ ನೋಡಿದೆ ಈ ಸಿನಿಮಾವನ್ನು ನೋಡಿದ ಹಿನ್ನೆಲೆಯಲ್ಲಿ ನನಗೆ ಟಗರು ಪಲ್ಯ ಚಿತ್ರವು ಸಿಕ್ಕಿದ್ದು ಇದು ಅಪ್ಪು(Punit Rajkumar) ರವರ ಆಶೀರ್ವಾದ ಎನಿಸುತ್ತದೆ. ಹಾಗೆಯೇ ನಟ ಯಶ್(Yash) ಎಂದರೆ ನನಗೆ ತುಂಬಾ ಇಷ್ಟ ನನ್ನ ಸಿನಿಮಾ ಕೆರಿಯರ್ ನಲ್ಲಿ ಉತ್ತಮ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ ಎಂದು ತಮ್ಮ ಸಿನಿಮಾ ಟಗರು ಪಲ್ಯ ಚಿತ್ರದ ಬಗ್ಗೆ ನೆನಪಿರಲಿ ಪ್ರೇಮ್ ಮಗಳು ಅಮೃತ ಮಾತನಾಡಿದರು.

Be the first to comment

Leave a Reply

Your email address will not be published.


*